ಬಾಲಿವುಡ್ 'ಕ್ವೀನ್' ಸಿನಿಮಾ ಸೌತ್ ಚಿತ್ರರಂಗದ ನಾಲ್ಕು ಭಾಷೆಗಳಲ್ಲಿ ಬರುತ್ತಿದೆ. ಇದರ ಕನ್ನಡದ ಅವತರಣಿಕೆಯಲ್ಲಿ ನಟಿ ಪಾರೂಲ್ ಯಾದವ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ನಾಯಕಿ ಮಾತ್ರವಲ್ಲದೆ ಪಾರೂಲ್ ಸಹ ನಿರ್ಮಾಪಕಿ ಕೂಡ ಆಗಿದ್ದಾರೆ. ಪಾರೂಲ್ ಕನ್ನಡಕ್ಕೆ ಬಂದು ಸದ್ಯ 5 ವರ್ಷ ಆಗಿದೆ. ಇಷ್ಟು ದಿನ ಹೆಚ್ಚಾಗಿ ಗ್ಲಾಮರ್ ಮತ್ತು ಕಮರ್ಶಿಯಲ್ ಚಿತ್ರಗಳಿಗೆ ಅಂಟಿಕೊಂಡಿದ್ದ ಪಾರೂಲ್ ಈಗ ವಿಭಿನ್ನ ಪಾತ್ರ ಮಾಡಲು ಮುಂದೆ ಬಂದಿದ್ದಾರೆ. ಹಿಂದಿಯ 'ಕ್ವೀನ್' ಚಿತ್ರದ ಕಥೆಯನ್ನು ತುಂಬನೇ ಇಷ್ಟ ಪಟ್ಟಿರುವ ಪಾರೂಲ್ ಆ ಸಿನಿಮಾದ ರಿಮೇಕ್ ನಲ್ಲಿ ನಟಿಸಲು ಬಹಳ ಉತ್ಸುಕರಾಗಿದ್ದಾರೆ. 'ಕ್ವೀನ್' ಕನ್ನಡದಲ್ಲಿ 'ಬಟರ್ ಫ್ಲೈ' ಆಗಿದ್ದು ಈ ಚಿತ್ರವನ್ನು ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿದ್ದಾರೆ.ಪ್ಯಾರಿಸ್ ನಲ್ಲಿ 80 ರಷ್ಟು ಚಿತ್ರೀಕರಣ ಮುಗಿಸಿ ಪಾರೂಲ್ ಬೆಂಗಳೂರಿಗೆ ಬಂದಿದ್ದಾರೆ. ತಮ್ಮ ಕನಸಿನ ಚಿತ್ರ 'ಬಟರ್ ಫ್ಲೈ' ಬಗ್ಗೆ ಮಾತನಾಡಿದ್ದಾರೆ.